खबर / पोस्ट / जानकारी / विज्ञापन
दिनांक : 📅 1095740 - 39 - विश्राम दिवस |
| 2026-02-19 |
👁️ 1082 |
ಮಹಿಳಾ ಮತ್ತು ಮಕ್ಕಳ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ:
ಅಧಿಕಾರಿಗಳು ಪೊಲೀಸ್ ಇಲಾಖೆ ಸಮನ್ವಯದೊಂದಿಗೆ ಬಿಕ್ಷಾಟನೆ ಮುಕ್ತ ಮಾಡಲು ಸಹಕರಿಸಿ-ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
====================
ಬೀದರ, ಫೆಬ್ರವರಿ.19 (ಕರ್ನಾಟಕ ವಾರ್ತೆ):- ಬೀದರ ನಗರ ಪ್ರಮುಖ ವೃತ್ತಗಳಲ್ಲಿ ಮಹಿಳೆಯರು ಮಕ್ಕಳೊಂದಿಗೆ ಬಿಕ್ಷೆ ಬೇಡುತ್ತಿದ್ದು, ಈ ಬಗ್ಗೆ ಪೋಲಿಸ್‌ನೊಳಗೊಂಡAತೆ ಇಲಾಖೆಗಳ ಸಮನ್ವಯದಿಂದ ಕಾರ್ಯನಿರ್ವಹಿಸಿ ಬಿಕ್ಷಾಟನೆ ಮುಕ್ತ ಮಾಡಲು ಸಹಕರಿಸಿ, ಇಲ್ಲದಿದ್ದಲ್ಲಿ ಸಂಬAಧಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಿಶನ್ ಶಕ್ತಿ ಯೋಜನೆಯಡಿ ಬರುವ ಸಖಿ ಒನ್ ಸ್ಟಾಪ್ ಸೆಂಟರ್. ಬೇಟಿ ಬಚಾವೋ ಬೇಟಿ ಪಡಾವೋ, ಸಾಂತ್ವನ, ಸ್ವಾಧಾರ, ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯಗಳು, ಬಾಲಕಿಯರ ವಸತಿ ನಿಲಯಗಳು, ಮಹಿಳಾ ಸಬಲೀಕರಣ ಘಟಕ ಮತ್ತು ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ, ಹಾಗೂ ಕೌಟುಂಬಿಕ ಹಿಂಸೆಯಿAದ ಮಹಿಳೆಯರ ಸಂರಕ್ಷಣೆ ಕಾಯ್ದೆ-2005ರ ಯೋಜನೆಗಳ ಪ್ರಗತಿ ಪರಿಶೀಲನೆ ಮಾಡಿ, ಸದರಿ ಯೋಜನೆಗಳ ಕುರಿತು ಹೆಚ್ಚಿನ ಪ್ರಚಾರ ಕೈಗೊಳ್ಳಲು ಹಾಗೂ ಈ ಯೋಜನೆಗಳಡಿಯಲ್ಲಿ ಬರುವ ನೊಂದ ಮಹಿಳೆ/ಮಕ್ಕಳಿಗೆ ಹಾಗೂ ಎಲ್ಲಾ ಫಲಾನುಭವಿಗಳಿಗೆ ಸುವ್ಯವಸ್ಥಿತವಾಗಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಕ್ರಮವಹಿಸುವಂತೆ, ಹಾಗೂ ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯಡಿ, ಒಂದನೇ ಫಲಾನುಭವಿಗೆ ರೂ.59.50ಲಕ್ಷ ಹಾಗೂ ಎರಡನೇ ಫಲಾನುಭವಿ(ಹೆಣ್ಣು ಮಗು ಜನನ) ರೂ.15.55ಲಕ್ಷ ಅನುದಾನವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿರುತ್ತದೆ. ಈ ಕ್ರಮವಹಿಸಲು ಯೋಜನೆಯ ಪ್ರಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ಕೈ ಬಿಟ್ಟು ಹೋಗದಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಬಾಲ್ಯ ವಿವಾಹ ನಿಷೇಧ ಕಾಯ್ದೆ -2006ರ ಪ್ರಕಾರ ಜಿಲ್ಲೆಯಲ್ಲಿ ಏಪ್ರಿಲ್-2025 ರಿಂದ ಜನವರಿ-2026ರ ವರೆಗೆ ಒಟ್ಟು 52 ಬಾಲ್ಯ ವಿವಾಹಗಳನ್ನು ತಡೆ ಹಿಡಿಯಲಾಗಿದೆ. 05 ಬಾಲ್ಯ ವಿವಾಹಗಳು ಜರುಗಿರುತ್ತವೆ. ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಸದರಿ ಕಾಯ್ದೆಯಡಿ ಬಾಲ್ಯವಿವಾಹ ಮಾಡಿರುವ ಪೋಷಕರ ಜೊತೆಗೆ ಅದಕ್ಕೆ ಸಹಕಾರ ನೀಡಿರುವ ಧಾರ್ಮಿಕ ಮುಖಂಡರಿಗೆ ಕಲ್ಯಾಣ ಮಂಟಪ ನೀಡಿರುವ ಮುಖ್ಯಸ್ಥರಿಗೆ ಆಹ್ವಾನ ಪತ್ರಿಕೆ ಮುದ್ರಣಕಾರರಿಗೆ ಒಟ್ಟಾರೆ ಪ್ರತ್ಯೇಕ್ಷ ಹಾಗೂ ಪರೋಕ್ಷವಾಗಿ ಬಾಲ್ಯ ವಿವಾಹಕ್ಕೆ ಕಾರಣರಾದವರ ವಿರುದ್ಧ ಕಡ್ಡಾಯವಾಗಿ ಪ್ರಕರಣ ದಾಖಲು ಮಾಡಲು ಸೂಚಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ಮಾತನಾಡಿ, ಬಾಲ್ಯವಿವಾಹ ಮುಕ್ತ ಭಾರತ ಅಭಿಯಾನದಡಿಯಲ್ಲಿ ತಾಲ್ಲೂಕ ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಯಾವ ಗ್ರಾಮ ಪಂಚಾಯತಿಯಲ್ಲಿ ಬಾಲ್ಯವಿವಾಹ ಮುಕ್ತವಾಗಿರುತ್ತದೆ ಅಂತಹ ಗ್ರಾಮ ಪಂಚಾಯಿತಿಗೆ ರೂ.25000 ಬಹುಮಾನ ನೀಡುವುದರ ಬಗ್ಗೆ ಈಗಾಗಲೇ ಪತ್ರಿಕಾ ಪ್ರಕಟಣೆ
खबर कि अन्य लिंक :